• City & RTO
  • Car Brand
  • Car Model
  • Car Fuel Type
  • Car Variant
  • Registration Year
ನೋಂದಣಿ ಸಂಖ್ಯೆಯ ಮೂಲಕ ವಾಹನದ ವಿವರಗಳನ್ನು ಪರಿಶೀಲಿಸಿ
ప్రాసెసింగ్
    Other models
    Other variants
    Select your variant
    View all variants
      Secure
      We don’t spam
      ವಿವರಗಳನ್ನು ಚೆಕ್ ಮಾಡಿ
      Please wait..
      By clicking on “ವಿವರಗಳನ್ನು ಚೆಕ್ ಮಾಡಿ”, you agree to our Privacy Policy & Terms of Use
      Get Updates on WhatsApp
      Select Make
      Select Model
      Fuel Type
      Select variant
      Registration year
      Registration month
      Save & update
      Please wait..
      Search with another car number?

      We have found best plans for you!! Our advisor will get in touch with you soon.

      Please wait ...

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್

      ಮೋಟಾರ್ ವಾಹನ ಕಾಯ್ದೆ, 1988 ಪ್ರಕಾರ ಕರ್ನಾಟಕದಲ್ಲಿನ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಈ ನಂಬರ್ ಪ್ಲೇಟ್‌ಗಳು ಉನ್ನತ ಗುಣಮಟ್ಟದ ಅಲ್ಯೂಮಿನಿಯಂ‌ನಿಂದ ತಯಾರಾಗಿದ್ದು, ವಿಶಿಷ್ಟ ಗುರುತು ಸಂಖ್ಯೆ ಮತ್ತು ಸ್ನ್ಯಾಪ್ ಲಾಕ್‌ಗಳಂತಹ ವಿಶೇಷ ವಿನ್ಯಾಸ ಅಂಶಗಳನ್ನು ಹೊಂದಿರುತ್ತವೆ. ಟ್ರಾಫಿಕ್ ಉಲ್ಲಂಘನೆಗಳನ್ನು ತಪ್ಪಿಸಲು ಕರ್ನಾಟಕದ ಎಲ್ಲಾ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಹೊಂದಿರಬೇಕು. HSRP ನಂಬರ್ ಪ್ಲೇಟ್, ಅದರ ಅರ್ಜಿ ಪ್ರಕ್ರಿಯೆ, ಶುಲ್ಕ ಮತ್ತು ಇತರ ಮಾಹಿತಿಗಳನ್ನು ತಿಳಿಯಲು ಮುಂದುವರಿಸಿ ಓದಿ.

      Read more

      HSRP ನಂಬರ್ ಪ್ಲೇಟ್ ಎಂದರೇನು?

      ಎಚ್‌ಎಸ್‌ಆರ್‌ಪಿ ಒಂದು ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ ಆಗಿದ್ದು ನಂಬರ್ ಪ್ಲೇಟ್ ಅನ್ನು ವಾಹನ ಕಳವು ಮತ್ತು ಇತರ ಅಪರಾಧಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾಗಿದೆ. ಈ ನಂಬರ್ ಪ್ಲೇಟ್‌ಗಳಲ್ಲಿ ವಿಶಿಷ್ಟ 12-ಅಂಕಿಯ ಕೋಡ್, ಸ್ನ್ಯಾಪ್-ಲಾಕ್ ವ್ಯವಸ್ಥೆ ಮತ್ತು ಕ್ರೋಮಿಯಂ ಹೋಲೋಗ್ರಾಂ ಸೇರಿದಂತೆ ಹಲವು ಭದ್ರತಾ ವೈಶಿಷ್ಟ್ಯಗಳಿವೆ. ಇವು ಕಳವು, ನಕಲಿ ಮಾಡುವುದು ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು ಸಹಾಯ ಮಾಡುತ್ತವೆ. ಹೊಸ ವಾಹನಗಳಿಗೆ ಅಧಿಕೃತ ಡೀಲರ್‌ಗಳಿಂದಲೇ HSRP ನಂಬರ್ ಪ್ಲೇಟ್ ಅಳವಡಿಸಲಾಗುತ್ತದೆ. ಆದರೆ 2019ಕ್ಕೂ ಮೊದಲು ನೋಂದಾಯಿತವಾದ ಹಳೆಯ ವಾಹನಗಳ ಮಾಲೀಕರು ನಿಯಮ ಪಾಲನೆಗಾಗಿ ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸಬೇಕು.

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್‌ನ ಪ್ರಯೋಜನಗಳು

      HSRP ನಂಬರ್ ಪ್ಲೇಟ್ ಪಡೆಯುವುದರಿಂದ ದೊರೆಯುವ ಕೆಲವು ಪ್ರಯೋಜನಗಳನ್ನು ಕೆಳಗೆ ನೀಡಲಾಗಿದೆ:

      • ಟ್ಯಾಂಪರ್-ಪ್ರೂಫ್ ಲಾಕ್‌ಗಳು: HSRP ನಂಬರ್ ಪ್ಲೇಟ್‌ಗಳನ್ನು ತೆಗೆದುಹಾಕಲು ಸಾಧ್ಯವಾಗದ ಸ್ನ್ಯಾಪ್ ಲಾಕ್‌ಗಳೊಂದಿಗೆ ಅಳವಡಿಸಲಾಗುತ್ತದೆ. ಇದರಿಂದ ಅವುಗಳನ್ನು ವಾಹನದಿಂದ ಹಾನಿಗೊಳಿಸಲು ಅಥವಾ ತೆಗೆದುಹಾಕಲು ಸಾಧ್ಯವಾಗುವುದಿಲ್ಲ.
      • ಲೀಗಲ್ ಕಾಂಪ್ಲಯನ್ಸ್: ಕೇಂದ್ರ ಮೋಟಾರ್ ವಾಹನ ನಿಯಮಗಳು, 1989 ಪ್ರಕಾರ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. ಇದನ್ನು ಪಾಲಿಸದಿದ್ದರೆ ಟ್ರಾಫಿಕ್ ದಂಡ ವಿಧಿಸಲಾಗುತ್ತದೆ.
      • ಸುಲಭ ಟ್ರ್ಯಾಕಿಂಗ್: ಮಾನದಂಡಿತ ವಿನ್ಯಾಸ ಮತ್ತು ಮಾದರಿಯಿಂದ HSRP ನಂಬರ್ ಪ್ಲೇಟ್‌ಗಳನ್ನು ಸುಲಭವಾಗಿ ಸ್ಕ್ಯಾನ್ ಮಾಡಬಹುದು.

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

      ಕೆಳಗಿನ ಹಂತಗಳನ್ನು ಅನುಸರಿಸಿ ಕರ್ನಾಟಕದಲ್ಲಿ HSRP ನೋಂದಣಿ ಮಾಡಬಹುದು:

      • ಹಂತ 1: BOOK-MY-HSRP Website ತೆರೆಯಿರಿ ಮತ್ತು ಹೋಮ್‌ಪೇಜ್‌ನ “ಕಲರ್ ಸ್ಟಿಕ್ಕರ್ ಹೊಂದಿರುವ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್” ವಿಭಾಗದ “ಬುಕ್” ಮೇಲೆ ಕ್ಲಿಕ್ ಮಾಡಿ.
      • ಹಂತ 2: ರಾಜ್ಯಗಳ ಡ್ರಾಪ್‌ಡೌನ್ ಪಟ್ಟಿಯಿಂದ “ಕರ್ನಾಟಕ” ಆಯ್ಕೆ ಮಾಡಿ ಮತ್ತು ನಿಮ್ಮ ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ ಹಾಗೂ ಚ್ಯಾಸಿಸ್ ಸಂಖ್ಯೆಯನ್ನು ನಮೂದಿಸಿ. ಕ್ಯಾಪ್ಚಾ ಪೂರ್ಣಗೊಳಿಸಿ “ಇಲ್ಲಿ ಕ್ಲಿಕ್ ಮಾಡಿ” ಮೇಲೆ ಕ್ಲಿಕ್ ಮಾಡಿ.
      • ಹಂತ 3: ಸಮೀಪದ HSRP ಫಿಟ್‌ಮೆಂಟ್ ಸೆಂಟರ್ ಆಯ್ಕೆ ಮಾಡಿ ಮತ್ತು ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಅಳವಡಿಸಲು ಅಪಾಯಿಂಟ್‌ಮೆಂಟ್ ಬುಕ್ ಮಾಡಿ.
      • ಹಂತ 4: ನಿಮ್ಮ ಮಾಹಿತಿಯನ್ನು ಪರಿಶೀಲಿಸಿ ಮತ್ತು HSRP ಆನ್‌ಲೈನ್ ಪಾವತಿಯನ್ನು ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಪಾವತಿ ರಸೀದಿಯನ್ನು ಡೌನ್‌ಲೋಡ್ ಮಾಡಿಕೊಂಡಿರಿ.

      ನಿಮ್ಮ ಅಪಾಯಿಂಟ್‌ಮೆಂಟ್ ದಿನದಂದು HSRP ಫಿಟ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಮತ್ತು ನಿಮ್ಮ ವಾಹನಕ್ಕೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ.

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್‌ಗೆ ಅಗತ್ಯ ದಾಖಲೆಗಳು

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಪಡೆಯಲು ಯಾವುದೇ ವಿಶೇಷ ದಾಖಲೆಗಳನ್ನು ಸಲ್ಲಿಸುವ ಅಥವಾ ಅಪ್‌ಲೋಡ್ ಮಾಡುವ ಅಗತ್ಯವಿಲ್ಲ. ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಲು ನಿಮ್ಮ ವಾಹನದ ಆರ್‌ಸಿ ಮಾತ್ರ ಬೇಕಾಗುತ್ತದೆ. ಉದಾಹರಣೆಗೆ: ವಾಹನದ ನೋಂದಣಿ ಸಂಖ್ಯೆ, ಎಂಜಿನ್ ಸಂಖ್ಯೆ, ಮತ್ತು ಚ್ಯಾಸಿಸ್ ಸಂಖ್ಯೆ.

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ದರಗಳು

      ಕೆಳಗಿನ ಪಟ್ಟಿಯಲ್ಲಿ ಕರ್ನಾಟಕದ HSRP ನಂಬರ್ ಪ್ಲೇಟ್ ದರಗಳನ್ನು ನೀಡಲಾಗಿದೆ:

      ವಾಹನ ಪ್ರಕಾರ ಬೆಲೆ (ಜಿಸ್ಟ್ ರಹಿತ)
      ಟು-ವೀಲರ್ ₹320 - ₹500
      ತ್ರೀ-ವೀಲರ್ ₹350 - ₹450
      ಫೋರ್-ವೀಲರ್ ₹590 - ₹860
      ವಾಣಿಜ್ಯ ವಾಹನಗಳು ₹600 - ₹800

      ಕರ್ನಾಟಕದಲ್ಲಿ HSRP ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು?

      ನಿಮ್ಮ ಕರ್ನಾಟಕ HSRP ನಂಬರ್ ಪ್ಲೇಟ್ ಸ್ಥಿತಿಯನ್ನು ಪರಿಶೀಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

      • ಹಂತ 1: Book My HSRP ವೆಬ್ಸೈಟ್ ಗೆ ಭೇಟಿ ನೀಡಿ.
      • ಹಂತ 2: ಹೋಮ್‌ಪೇಜ್‌ನಲ್ಲಿರುವ “ನಿಮ್ಮ ಆರ್ಡರ್ ಅನ್ನು ಟ್ರ್ಯಾಕ್ ಮಾಡಿ” ಮೇಲೆ ಕ್ಲಿಕ್ ಮಾಡಿ.
      • ಹಂತ 3: ನಿಮ್ಮ ಆರ್ಡರ್ ಸಂಖ್ಯೆ ಮತ್ತು ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ.
      • ಹಂತ 4: ಕ್ಯಾಪ್ಚಾ ನಮೂದಿಸಿದ ನಂತರ “ಸರ್ಚ್” ಮೇಲೆ ಕ್ಲಿಕ್ ಮಾಡಿ.

      ನಂತರ ನಿಮ್ಮ ಕರ್ನಾಟಕ HSRP ನಂಬರ್ ಪ್ಲೇಟ್ ಸ್ಥಿತಿ ಸ್ಕ್ರೀನ್‌ನಲ್ಲಿ ಕಾಣಿಸುತ್ತದೆ.

      ಕರ್ನಾಟಕದಲ್ಲಿ ಡುಪ್ಲಿಕೇಟ್ HSRP ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

      ನಿಮ್ಮ HSRP ನಂಬರ್ ಪ್ಲೇಟ್ ಕಳೆದುಹೋದರೆ ಅಥವಾ ಹಾನಿಗೊಳಗಾದರೆ, ಮೊದಲು ಸಮೀಪದ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ನಂತರ ಡುಪ್ಲಿಕೇಟ್ HSRP ಗೆ ಅರ್ಜಿ ಸಲ್ಲಿಸಬೇಕು. ಕರ್ನಾಟಕದಲ್ಲಿ ಡುಪ್ಲಿಕೇಟ್ HSRP ನಂಬರ್ ಪ್ಲೇಟ್‌ಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ:

      • ಹಂತ 1: Book My HSRP ವೆಬ್ಸೈಟ್ ತೆರೆಯಿರಿ. “ಬದಲಾವಣೆ / ಉಳಿಸಿಕೊಳ್ಳಿ / ವರ್ಗಾವಣೆ” ವಿಭಾಗದ “ಬುಕ್” ಮೇಲೆ ಕ್ಲಿಕ್ ಮಾಡಿ.
      • ಹಂತ 2: ರಾಜ್ಯಗಳ ಪಟ್ಟಿಯಿಂದ “ಕರ್ನಾಟಕ” ಆಯ್ಕೆಮಾಡಿ. ನಿಮ್ಮ ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ. ಎಂಜಿನ್ ಮತ್ತು ಚ್ಯಾಸಿಸ್ ಸಂಖ್ಯೆಗಳ ಕೊನೆಯ ಐದು ಅಂಕಿಗಳನ್ನು ಟೈಪ್ ಮಾಡಿ. ಕ್ಯಾಪ್ಚಾ ಪೂರ್ಣಗೊಳಿಸಿ “ಇಲ್ಲಿ ಕ್ಲಿಕ್ ಮಾಡಿ” ಮೇಲೆ ಕ್ಲಿಕ್ ಮಾಡಿ.
      • ಹಂತ 3: ಸಮೀಪದ HSRP ಫಿಟ್‌ಮೆಂಟ್ ಸೆಂಟರ್‌ನಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಮತ್ತು ಶುಲ್ಕ ಪಾವತಿಸಿ.
      • ಹಂತ 4: ಅಪಾಯಿಂಟ್‌ಮೆಂಟ್ ದಿನದಂದು ಫಿಟ್‌ಮೆಂಟ್ ಸೆಂಟರ್‌ಗೆ ಭೇಟಿ ನೀಡಿ ಡುಪ್ಲಿಕೇಟ್ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ. ಜೊತೆಗೆ ಹಾನಿಗೊಂಡ HSRP ನಂಬರ್ ಪ್ಲೇಟ್‌ಗಳನ್ನು ಸಲ್ಲಿಸಿ ಮತ್ತು ಎಲ್ಲಾ ವಿವರಗಳನ್ನು ಪರಿವಾಹನ್ ಸೇವಾ ಪೋರ್ಟಲ್ ನಲ್ಲಿ ಅಪ್‌ಡೇಟ್ ಮಾಡಿಸಬೇಕು.

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಮತ್ತು ಸಾಮಾನ್ಯ ನಂಬರ್ ಪ್ಲೇಟ್ ನಡುವಿನ ವ್ಯತ್ಯಾಸ

      ಸಾಮಾನ್ಯ ನಂಬರ್ ಪ್ಲೇಟ್ ಮತ್ತು HSRP ನಂಬರ್ ಪ್ಲೇಟ್ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ತಿಳಿಯಲು ಕೆಳಗಿನ ಪಟ್ಟಿಯನ್ನು ನೋಡಿ:

      ವೈಶಿಷ್ಟ್ಯ HSRP ನಂಬರ್ ಪ್ಲೇಟ್ ಸಾಮಾನ್ಯ ನಂಬರ್ ಪ್ಲೇಟ್
      ಭದ್ರತಾ ವೈಶಿಷ್ಟ್ಯಗಳು UIN, ಹೋಲೋಗ್ರಾಂ, ಟ್ಯಾಂಪರ್-ಪ್ರೂಫ್ ವ್ಯವಸ್ಥೆ ಇತ್ಯಾದಿ ಉನ್ನತ ಭದ್ರತಾ ವೈಶಿಷ್ಟ್ಯಗಳಿಲ್ಲ
      ಮರುಬಳಕೆ ಮರುಬಳಕೆ ಸಾಧ್ಯವಿಲ್ಲ ಮರುಬಳಕೆ ಸಾಧ್ಯ
      ಅಶೋಕ ಚಕ್ರ ಲಭ್ಯ ಲಭ್ಯವಿಲ್ಲ
      ಪ್ರಮಾಣೀಕರಣ ತ್ವರಿತ ಪರಿಶೀಲನೆ ಸಾಧ್ಯ ತ್ವರಿತ ಪರಿಶೀಲನೆ ವ್ಯವಸ್ಥೆ ಇಲ್ಲ
      ಕಲರ್ ಕೋಡ್ ಸ್ಟಿಕ್ಕರ್‌ಗಳು ಲಭ್ಯ ಲಭ್ಯವಿಲ್ಲ

      HSRP ಕಲರ್-ಕೋಡೆಡ್ ಸ್ಟಿಕ್ಕರ್ ಎಂದರೇನು?

      HSRP ಕಲರ್-ಕೋಡೆಡ್ ಸ್ಟಿಕ್ಕರ್ ಅನ್ನು ವಾಹನದ “ಮೂರನೇ ರಿಜಿಸ್ಟ್ರೇಶನ್ ಮಾರ್ಕ್” ಎಂದೂ ಕರೆಯಲಾಗುತ್ತದೆ ಮತ್ತು ಇದನ್ನು ವಾಹನದ ವಿಂಡ್‌ಶೀಲ್ಡ್ ಮೇಲೆ ಅಳವಡಿಸಲಾಗುತ್ತದೆ. ಈ ಸ್ಟಿಕ್ಕರ್‌ನಲ್ಲಿರುವ ಪ್ರತಿಯೊಂದು ಬಣ್ಣವು ಕೆಳಗಿನ ಮಾಹಿತಿಯನ್ನು ಸೂಚಿಸುತ್ತದೆ:

      • ಲೈಟ್ ಬ್ಲೂ: ಪೆಟ್ರೋಲ್ ವಾಹನಗಳು
      • ಆರೆಂಜ್: ಡೀಸೆಲ್ ವಾಹನಗಳು
      • ಗ್ರೇ: ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು

      ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ

      HSRP ಕಾನೂನುಬದ್ಧವಾಗಿ ಕಡ್ಡಾಯವಾಗಿರುವುದರಿಂದ, ಈ ನಿಯಮವನ್ನು ಪಾಲಿಸದ ವಾಹನ ಮಾಲೀಕರಿಗೆ ಭಾರತೀಯ ಮೋಟಾರ್ ವಾಹನ ನಿಯಮಗಳ ಪ್ರಕಾರ ದಂಡ ವಿಧಿಸಲಾಗುತ್ತದೆ. ಕರ್ನಾಟಕದಲ್ಲಿ HSRP ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸಿದರೆ ₹500 ರಿಂದ ₹1,000 ವರೆಗೆ ದಂಡ ವಿಧಿಸಬಹುದು. ದಂಡದ ಮೊತ್ತವು ವಾಹನದ ಪ್ರಕಾರ ಬದಲಾಗಬಹುದು.

      ಎಫ್‌ಎಕ್ಯೂಗಳು

      ಇಲ್ಲ. ಕರ್ನಾಟಕದಲ್ಲಿ ಸ್ಥಳೀಯ ಅಂಗಡಿಯಿಂದ HSRP ನಂಬರ್ ಪ್ಲೇಟ್ ಪಡೆಯಲು ಸಾಧ್ಯವಿಲ್ಲ. ನೀವು ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್, SIAM ಅಥವಾ BOOK-MY-HSRP Website ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು.

      HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ₹500 ರಿಂದ ₹1,000 ವರೆಗೆ ದಂಡ ವಿಧಿಸಬಹುದು.

      ಹೌದು. ಕರ್ನಾಟಕದ ಎಲ್ಲಾ ವಾಹನಗಳಿಗೆ HSRP ಕಲರ್-ಕೋಡೆಡ್ ಸ್ಟಿಕ್ಕರ್ ಕಡ್ಡಾಯವಾಗಿದೆ. ಇದನ್ನು ವಾಹನದ “ಮೂರನೇ ರಿಜಿಸ್ಟ್ರೇಶನ್ ಮಾರ್ಕ್” ಎಂದೂ ಕರೆಯಲಾಗುತ್ತದೆ.

      ಹೌದು. ಏಪ್ರಿಲ್ 2019ಕ್ಕೂ ಮೊದಲು ನೋಂದಾಯಿತ ಎಲ್ಲಾ ಹಳೆಯ ವಾಹನಗಳಿಗೆ HSRP ಕಡ್ಡಾಯವಾಗಿದೆ. ಅಧಿಕೃತ ವಿತರಕರ ಮೂಲಕ HSRP ಪಡೆಯಬಹುದು.

      HSRP ಕಲರ್-ಕೋಡೆಡ್ ಸ್ಟಿಕ್ಕರ್‌ನಲ್ಲಿ ಕೆಳಗಿನ ವಿವರಗಳು ಇರುತ್ತವೆ: ವಾಹನದ ನೋಂದಣಿ ಸಂಖ್ಯೆ, ಇಂಧನದ ಪ್ರಕಾರ, ಎಮಿಷನ್ ಸ್ಟ್ಯಾಂಡರ್ಡ್, 12-ಅಂಕಿಯ ಲೇಸರ್ ಕೋಡ್, ನೋಂದಣಿ ದಿನಾಂಕ.

      Disclaimer: The list mentioned is according to the alphabetical order of the insurance companies. Policybazaar does not endorse, rate or recommend any particular insurer or insurance product offered by any insurer. This list of plans listed here comprise of insurance products offered by all the insurance partners of Policybazaar. For complete list of insurers in India refer to the Insurance Regulatory and Development Authority of India website www.irdai.gov.in
      Disclaimer: The list mentioned is according to the alphabetical order of the insurance companies. Policybazaar does not endorse, rate or recommend any particular insurer or insurance product offered by any insurer. This list of plans listed here comprise of insurance products offered by all the insurance partners of Policybazaar. For complete list of insurers in India refer to the Insurance Regulatory and Development Authority of India website www.irdai.gov.in

      *Savings are based on the comparison between the highest and the lowest premium for own damage cover (excluding add-on covers) provided by different insurance companies for the same vehicle with the same IDV and same NCB. Actual time for transaction may vary subject to additional data requirements and operational processes.

      Close
      Download the Policybazaar app
      to manage all your insurance needs.
      INSTALL
      Claude
      top